News diary kannada

News diary kannada

Share

Contact information, map and directions, contact form, opening hours, services, ratings, photos, videos and announcements from News diary kannada, Rajshahi Division.

02/10/2026

ಸಿನಿಮಾ ನಟನೆ ಬಿಟ್ಟು ವಿದೇಶದಲ್ಲಿ ಸೆಟಲ್‌ ಆದ ನಟಿ

ಜೋಶ್ ಸಿನಿಮಾ ಖ್ಯಾತಿಯ ಸ್ನೇಹಾ ಆಚಾರ್ಯ ಸದ್ಯ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಇವರು ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳು ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಅಂದರೆ ತುಂಬಾ ಇಷ್ಟಪಡುವ ಸ್ನೇಹಾ, ಹಿಂದಿಯಲ್ಲಿ ಸೆಲೆಬ್ರಿಟಿ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲ ಹಿಂದಿ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್‌ಬಾಸ್ ಸೀಸನ್ ೬ರಲ್ಲೂ ಕಾಣಿಸಿಕೊಂಡಿದ್ದ ಇವರು, ಕುಣಿಯೋಣ ಬಾರ ನೃತ್ಯ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ರಷ್ಯನ್ ಮೂಲದ ರಾಯನ್ ಎಂಬುವವರನ್ನು ಮದುವೆಯಾಗಿರುವ ಇವರು, ಪತಿಗೆ ವಿದೇಶದಲ್ಲಿ ಕೆಲಸ ಇರುವುದರಿಂದ ಅಲ್ಲಿಯೇ ನೆಲಸಿದ್ದಾರೆ. ಸ್ನೇಹಾ ಇತ್ತೀಚೆಗಷ್ಟೇ ಗಂಡು ಮಗುವಿನ ತಾಯಿಯಾಗಿದ್ದಾರೆ.

02/10/2026

ಅಮೆರಿಕದಲ್ಲಿ ಸೆಟಲ್‌ ಆದ ಪ್ಯಾಟೇ ಹುಡ್ಗೀರು ಹಳ್ಳಿ ಲೈಫು ಸ್ಪರ್ಧಿ

ಪ್ಯಾಟೇ ಹುಡ್ಗೀರು ಹಳ್ಳಿ ಲೈಫು ರಿಯಾಲಿಟಿ ಶೋನ ವಿಜೇತೆಯಾಗಿದ್ದ ನಯನಾ ಪುಟ್ಟಸ್ವಾಮಿ ಕೂಡ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಇವರು ಅನಂತ್‌ ನಾಗ್ ಜೊತೆ ಚಿಟ್ಟೆಹೆಜ್ಜೆ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಜೊತೆಗೆ ಸಿದ್ಧಾರ್ಥ, ಅಯೋಧ್ಯಪುರಂ, ಅಲೆಮಾರಿ ಸಿನಿಮಾಗಳಲ್ಲಿ ನಟಿಸಿದ್ದರು. ಬಿಗ್‌ಬಾಸ್ ಸೀಸನ್ 6ರಲ್ಲೂ ಕಾಣಿಸಿಕೊಂಡಿದ್ದ ನಯನಾ, ಸದ್ಯ ಚರಣ್ ಎಂಬುವವರನ್ನು ಮದುವೆಯಾಗಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ನಯನಾ ಪತಿಗೆ ಅಮೆರಿಕಾದ ಯುನಿವರ್ಸಿಟಿಯಲ್ಲಿ ಕೆಲಸ ಸಿಕ್ಕಿರುವುದರಿಂದ ಇಡೀ ಕುಟುಂಬ ಅಲ್ಲಿ ನೆಲಸಿದೆ. ಇಷ್ಟುದಿನ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ನಯನಾ, ಸದ್ಯ ಅಮೆರಿಕಾದಲ್ಲಿ ಟೀಚರ್‌ ಆಗಿ ಕೆಲಸ ಆರಂಭಿಸಿದ್ದಾರೆ.

02/10/2026

ಅಗ್ನಿಸಾಕ್ಷಿಯ ಚಂದ್ರಿಕಾ ಗಂಡ ಅಮೆರಿಕಾದಲ್ಲಿ ಜೀವನ

ನಟಿ ರಾಜೇಶ್ವರಿ ಪಾರ್ಥಸಾರಥಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ 'ಚಂದ್ರಿಕಾ' ಪಾತ್ರದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದರು. ಬಳಿಕ ಕಾರಾಣಾಂತರದಿಂದ ಅರ್ಧಕ್ಕೆ ಸೀರಿಯಲ್ ಬಿಟ್ಟರು. ಬಳಿಕ ಕಲ್ಯಾಣ್ ಕ್ರಿಶ್ ಎಂಬುವವರನ್ನು ಮದುವೆಯಾದ ರಾಜೇಶ್ವರಿ, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇವರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿ ನೆಲಸಿದ್ದಾರೆ. ಈ ದಂಪತಿಗೆ ಹವ್ಯಾ ಎಂಬ ಮಗಳಿದ್ದಾಳೆ.

02/10/2026

ವಿದೇಶದಲ್ಲಿ ಬದುಕು ಕಟ್ಟಿಕೊಂಡ ಮನೆದೇವ್ರು ನಟಿ

ಮಧುಬಾಲ, ಮನೆದೇವ್ರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ ಅವರ ಪತಿ ವಿಘ್ನೇಶ್ ಶರ್ಮಾ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ತಾವೂ ಕೂಡ ವಿದೇಶದಲ್ಲಿ ನೆಲಸಿರುವ ಅರ್ಚನಾ, ಅಲ್ಲಿಯೇ ಹೆಚ್‌ಆರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರು ಇತ್ತೀಚೆಗಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

02/10/2026

ನಟನೆ ಕಲಿಯೋದಕ್ಕೆ ಸಾಲ ಮಾಡಿದ್ದ ನಟ ವಿಜಯ್‌ ಸೂರ್ಯ!

‘ಕ್ರೇಜಿಲೋಕ’ ಸಿನಿಮಾದಲ್ಲಿ ಗುರುತಿಸಿಕೊಂಡು ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದವರು ನಟ ವಿಜಯ್‌ ಸೂರ್ಯ್. ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ದಾರ್ಥ್‌ ಪಾತ್ರದ ಮೂಲಕ ಕಿರುತೆರೆಯ ಲೋಕದಲ್ಲಿ ಸ್ಟಾರ್‌ ಆಗಿ ಮಿಂಚಿದರು.ನಂತರ ‘ಪ್ರೇಮಲೋಕ’, ನಮ್ಮ ಲಚ್ಚಿ’, ‘ದೃಷ್ಟಿಬೊಟ್ಟು’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದರು. ಸದ್ಯ ಜೀ ಕನ್ನಡ ವಾಹಿನಿಯ ಜಗದ್ದಾತ್ರಿ ಧಾರಾವಾಹಿಯಲ್ಲಿ ಕಾಪ್‌(ಪೊಲೀಸ್‌) ಪಾತ್ರ ಮಾಡುತ್ತಿದ್ದಾರೆ. ವಿಜಯ್‌ಸೂರ್ಯ ಅವರು ಇಂಡಸ್ಟ್ರಿಗೆ ಬಂದು 15ವರ್ಷ ಆಯ್ತು.
#

02/10/2026

ವಿಜಯ್‌ ಸೂರ್ಯರ ಫಸ್ಟ್‌ ಹೀರೋಯಿನ್‌ ನಾನು

ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಕವಿತಾ ಗೌಡ. ಇಂಡಸ್ಟ್ರಿಗೆ ಬಂದು 13ವರ್ಷ ಕಳೆದರು ಚಿನ್ನು ಪಾತ್ರ ಇವರನ್ನ ಆವರಿಸಿಕೊಂಡಿದೆ. ಅಷ್ಟರ ಮಟ್ಟಿಗೆ ವೀಕ್ಷಕರ ಮನೆ ಮಗಳು ಇವರು. ನಂತರ ‘ವಿದ್ಯಾವಿನಾಯಕ’ ಸೀರಿಯಲ್‌ ಮಾಡಿದ್ರು. ಅಲ್ಲಿಂದ ತಮಿಳು ಭಾಷೆಯಲ್ಲಿಯೂ ಒಂದಿಷ್ಟು ಧಾರಾವಾಹಿ ಮಾಡಿ, ಜನಪ್ರಿಯತೆ ಪಡೆದರು.ಚಂದನ್‌ ಗೌಡ ಅವರನ್ನ ಮದುವೆಯಾದ ನಂತರ ಕೊಂಚ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು. ಮುದ್ದಾದ ಮಗುವಿಗೆ ತಾಯಿಯಾದ ಬಳಿಕ ಮಗನಿಗೆ ಹೆಚ್ಚಿನ ಆದ್ಯತೆ ಕೊಟ್ಟರು. ಸದ್ಯ ‘ಜಗದ್ದಾತ್ರಿ’ ಧಾರಾವಾಹಿಯ ಕೌಶಿಕಿ ಎಂಬ ಪವರ್‌ಫುಲ್‌ ಪಾತ್ರದ ಮೂಲಕ ತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.

02/10/2026

“ನನಗೆ ಯಾರು ಮದುವೆ ಆಗುವಂತೆ ಹೇಳುತ್ತಿಲ್ಲ, ಅಕ್ಕ ಬಿಡ್ತಿಲ್ಲ”

‘ಬಿಗ್ ಬಾಸ್‌ ಕನ್ನಡ ಸೀಸನ್‌-13’ರ ಸ್ಪರ್ಧಿ ಸೌಂದರ್ಯ ಶೆಟ್ಟಿ ರಿಯಾಲಿಟಿ ಶೋಗಳ ಮೂಲಕವೇ ಜನಪ್ರಿಯತೆ ಪಡೆದವರು. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ‘ಸ್ಪ್ಲಿಟ್ಸ್‌ವಿಲ್ಲಾ’ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಈ ಶೋನಲ್ಲಿ ತಮ್ಮ ಬದುಕಿನಲ್ಲಿ ನಡೆದ ಬ್ರೇಕ್‌ ಅಪ್‌ ಕಹಾನಿ ಕೂಡ ಹಂಚಿಕೊಂಡಿದ್ದರು. ಸದ್ಯ ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇವರು, ಮದುವೆ ಬಗ್ಗೆ ಸಹ ಸ್ಪರ್ಧಿ ಯಶಸ್‌ ಕೃಷ್ಣ ಜೊತೆಗೆ ಮನದಾಳವನ್ನ ಹಂಚಿಕೊಂಡಿದ್ದಾರೆ.

ಸೌಂದರ್ಯ ಕುಟುಂಬ ಮಂಗಳೂರಿನವರು. ನೆಲೆಯೂರಿದ್ದು ಬಾಂಬೆಯಲ್ಲಿ. ಇವರ ಸಹೋದರಿ ಹೆಸರು ಐಶ್ವರ್ಯ ಶೆಟ್ಟಿ, ಸೌಂದರ್ಯಕ್ಕಿಂತ 2ವರ್ಷ ದೊಡ್ಡವರು. ಸದ್ಯ 26 ವರ್ಷದ ಸೌಂದರ್ಯ ಶೆಟ್ಟಿ ಅವರು ತಮಗೆ ಮದುವೆ ಆಗುವ ಅಲೋಚನೆಯೇ ಬಂದಿಲ್ಲ. ನಾನೊಂದು ಮದುವೆ ಆಗಬಹುದಾ? ಎಂಬ ವಿಚಾರಗಳ ಬಗ್ಗೆ ಬಿಗ್‌ ಬಾಸ್‌ ಶೋನಲ್ಲಿ ಮಾತ್ನಾಡಿದ್ದಾರೆ.

02/10/2026

ಆವೇಶಂನಲ್ಲಿ ಧರಿಸಿದ್ದು ಹೆಂಡತಿಯ ರಿಯಲ್ ಗೋಲ್ಡ್

ಮಾಲಿವುಡ್​ನ ಸ್ಟಾರ್ ನಟ ಫಹದ್ ಫಾಸಿಲ್ ಅಭಿನಯಿಸಿದ ಆವೇಶಂ ಸಿನಿಮಾ ಭರ್ಜರಿ ಹಿಟ್ ಆಯಿತು. ಇದೊಂದು ರೀತಿ ವಿಭಿನ್ನ ಪ್ರಕಾರದಲ್ಲಿ ಮೂಡಿ ಬಂದಿದ್ದಷ್ಟೇ ಅಲ್ಲದೆ ಅಷ್ಟೇ ಪರಿಣಾಮಕಾರಿಯಾಗಿ ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತು. ಇತ್ತೀಚೆಗೆ ನಟ ಆವೇಶಂ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚರಾನ್ನು ರಿವೀಲ್ ಮಾಡಿದರು. 'ಆವೇಶಮ್' ಚಿತ್ರದಲ್ಲಿ ರಂಗಣ್ಣನ್ ಧರಿಸಿದ್ದ ಚಿನ್ನದ ಆಭರಣಗಳ ಹಿಂದಿನ ರಹಸ್ಯವನ್ನು ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಚಿತ್ರದಲ್ಲಿ ರಂಗಣ್ಣನ್ ಧರಿಸಿದ್ದ ಭಾರವಾದ ಚಿನ್ನದ ಆಭರಣಗಳು ಅವರ ಪತ್ನಿ ಮತ್ತು ನಟಿ ನಜ್ರಿಯಾ ಅವರದ್ದಾಗಿದ್ದವು ಎಂದು ಫಹಾದ್ ಹೇಳಿದ್ದಾರೆ. ತಮ್ಮ ಹೊಸ ಚಿತ್ರ 'ಡೋಂಟ್ ಟ್ರಬಲ್ ದಿ ಟ್ರಬಲ್' ಪ್ರಚಾರದ ಭಾಗವಾಗಿ ಬಿಹೈಂಡ್ ವುಡ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಟ ಈ ವಿವರಗಳನ್ನು ಹಂಚಿಕೊಂಡಿದ್ದಾರೆ.

02/10/2026

ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಖ್ಯಾತ ಸೆಲೆಬ್ರಿಟಿ ದಂಪತಿ!

ದಿಲೀಪ್ ಮತ್ತು ಕಾವ್ಯ ಮಾಧವನ್ ಮಲಯಾಳಂನ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಸ್ವಲ್ಪ ವಿವಾದವೂ ಇವರ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ. ಕಾವ್ಯ ಮಾಧವನ್ ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮದುವೆಯ ನಂತರ ಬೆಳ್ಳಿತೆರೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಕಾವ್ಯ ಮಾಧವನ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ದಿಲೀಪ್ ಅವರ ಸಂಬಂಧಿಗಳ ಮದುವೆ ಆರತಕ್ಷತೆ ಮತ್ತು ಸ್ನೇಹಿತರು ಮತ್ತು ನಿಕಟ ಸಂಬಂಧಿಗಳ ಕುಟುಂಬ ಕಾರ್ಯಕ್ರಮಗಳಲ್ಲಿ ಕಾವ್ಯಾ ಜೊತೆ ಹೋದಾಗ ಮಾತ್ರ ಅಭಿಮಾನಿಗಳು ಅವರನ್ನು ನೋಡಬಹುದು. ಅದಕ್ಕಾಗಿಯೇ ಇಬ್ಬರೂ ಒಟ್ಟಿಗೆ ಕಾರ್ಯಕ್ರಮಗಳಿಗೆ ಹಾಜರಾಗುವ ಚಿತ್ರಗಳು ಮತ್ತು ವೀಡಿಯೊಗಳು ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿವೆ.

02/10/2026

ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ

ಬೆಂಗಳೂರಿನ ನೆಲಮಂಗಲ ಮೂಲದ ಗೀತಾ ಮಾತಾಜಿಯವರು ಕಳೆದ ನಾಲ್ಕು ವರ್ಷಗಳಿಂದ ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡು ದೇಶ-ಧರ್ಮಕ್ಕೆ ಒಳಿತಾಗಲೆಂದು 40 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದಾರೆ. ಗೀತಾ ಮಾತಾಜಿಯವರ ಈ ಅಪರೂಪದ ಭಕ್ತಿ ಪಯಣಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜನ ಕೂಡ ಕೈ ಮುಗಿದು ಅಭಿನಂದನೆ ಸಲ್ಲಿಸಿದ್ದಾರೆ. ಗೀತಾ ಮಾತಾಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದರು. ಇದನ್ನೂ ಓದಿ: ನೈಸ್‌ ವಿಚಾರವಾಗಿ ಡಿಕೆಶಿ ಭೇಟಿಯಾಗಿದ್ದು ಸತ್ಯ – ಸಿದ್ದಲಿಂಗ ಮಹಾಸ್ವಾಮಿಗಳಿಂದ ಸ್ಪಷ್ಟನೆ

ಈ ವರ್ಷವೂ ತಮ್ಮ ಭಕ್ತಿಯ ಪಯಣವನ್ನು ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನದತ್ತ ಮುಂದುವರಿಸಿದ್ದಾರೆ. ಈ ಬಾರಿಯ ಪಾದಯಾತ್ರೆಯಲ್ಲಿ ಗೀತಾ ಮಾತಾಜಿ ಅವರೊಂದಿಗೆ ಆಕರ್ಷಿತವಾದ ಬಾಲಕೃಷ್ಣ ಭಕ್ತರ ಗಮನ ಸೆಳೆಯುತ್ತಿದೆ. ಕಿರೀಟ, ಆಭರಣಗಳು, ಆಕರ್ಷಕ ಹೂವಿನ ಹಾರಗಳು ಹಾಗೂ ಸಾಂಪ್ರದಾಯಿಕ ವಸ್ತ್ರಗಳಿಂದ ಕಂಗೊಳಿಸುವ ಪುಟ್ಟ ಬಾಲಕೃಷ್ಣನನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿರುವುದು ದಾರಿಯುದ್ದಕ್ಕೂ ಜನರ ಕಣ್ಮನ ಸೆಳೆಯುತ್ತಿದೆ.

Address


Rajshahi Division

Alerts

Be the first to know and let us send you an email when News diary kannada posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Rajshahi Division.