Hema
Hema
ಸಮಸ್ತ ವಿಶ್ವದ ಜನತೆಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಇಂದು ಇಡೀ ವಿಶ್ವದ ಜನರ ಜೀವನ ಸುಗಮವಾಗಿ ಸಾಗುತ್ತಿದೆ ಎಂದರೆ ಅದರ ಹಿಂದೆ ಎಷ್ಟೋ ಕೈಗಳ ಶ್ರಮ ಇದೆ. ಅಂತಹ ಕಷ್ಟ ಪಡುವ ಕೈಗಳಿಗೆ ಮನದ ಅಂತರಾಳದ ನಮನಗಳು. ಕಾರ್ಮಿಕ ಎಂದರೆ ಕನಿಷ್ಟ ಅಲ್ಲ. ಇವತ್ತು ಬೆಂಗಳೂರಿನಲ್ಲಿ ಪೌರಕಾರ್ಮಿಕ ಕೇವಲ ಒಂದೇ ಒಂದು ವಾರ ತಮ್ಮ ಕೆಲಸದಿಂದ ದೂರ ಉಳಿದರೆ ಬೆಂಗಳೂರು ಕಸದ ತೊಟ್ಟಿ ಆಗುವುದು ನೂರಕ್ಕೆ ನೂರು ಭಾಗ ಸತ್ಯ. ಎಲ್ಲಿನ ಡ್ರೈನೇಜ್ ಅಲ್ಲೆ ಕಟ್ಟಿಕಂಡು, ಚರಂಡಿ ನೀರು ರಸ್ತೆಗೆ ನುಗ್ಗಿ ಕೆಂಗೇರಿ ಮೊರಿಯಂತಾಗಿ, ರಾಶಿ ರಾಶಿ ಕಸ ಬಿದ್ದು , ಇ-ವೇಸ್ಟ್ ರವಾನೆ ಆಗದೆ, ಅಪಾರ್ಟಮೆಂಟ್ ಮನೆಗಳ ಕಸದ ಬುಟ್ಟಿಗಳು ತುಂಬಿ , ಕಸದ ಸಮಸ್ಯೆಯಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬೆಳೆದು , ಜನಗಳಿಗೆ ನಾನಾ ರೋಗಗಳು ಹರಡಿ, ಜನ ಜೀವನ ಸಾಗಿಸಾಲು ಪರದಾಡಬೇಕಾಗುತ್ತದೆ. ಕೇವಲ ಪೌರ ಕಾರ್ಮಿಕರು ಕೆಲಸ ಬಿಟ್ಟರೆ ಇಷ್ಟೆಲ್ಲ ಸಮಸ್ಯೆಗಳಿವೆ, ಇನ್ನುಳಿದ ರೈತಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ರೈಲ್ವೇ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕಂಪನಿ ನೌಕರರು, ಡಿ- ದರ್ಜೆ ನೌಕರರು, ಡೈವರ್ಸ್, ಸಾರಿಗೆ ಸಿಬ್ಬಂದಿ ಹೀಗೆ ಎಲ್ಲ ಬಗೆಯ ಕಾರ್ಮಿಕರು ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ನೆಮ್ಮದಿಯಿಂದ ಬದುಕುತ್ತಿದ್ದೆವೆ. ದೇಶ ಬೆಳೆಯುತ್ತಿರುವುದಕ್ಕೆ ಇಂಜಿನಿಯರ್ಸ್, ಇಂಡಸ್ರ್ಟಿಯಲಿಸ್ಟ್‌ಗಳು, ಬಿಸಿನೆಸ್ ಮ್ಯಾನ್ ಗಳು ಮುಂತಾದವರು ಕಾರಣವಾದರೆ, ದೇಶ ಬದುಕುತ್ತಿದೆ ಅಂದರೆ ಅದಕ್ಕೆ ರೈತರು ಮತ್ತು ಕಾರ್ಮಿಕರು ಮಾತ್ರ ಕಾರಣ. ಈ ಭೂಮಿ ಮೇಲೆ ಯಾರು ಕೀಳಲ್ಲ, ಯಾರು ಶ್ರೇಷ್ಠರಲ್ಲ. ಎಲ್ಲರೂ ಸಮಾನರು. ಅವರವರಿಗೆ ಅವರದೆ ಅದ ಮಹತ್ವವಿದೆ. ನಾವೆಲ್ಲಾ ಸಮಾನ ಮನಸ್ಕರಾಗಿ ಎಲ್ಲರನ್ನು ಸಮಭಾವದಿಂದ ನೋಡಣ . ಎಲ್ಲರನ್ನು ಗೌರವಿಸೋಣ. ನಾವೆಲ್ಲಾ ಸಮ ಸಮಾಜವನ್ನು ಕಟ್ಟೋಣ. ಇಂದೇ ಸಂಕಲ್ಪ ಮಾಡೋಣ.
ಧನ್ಯವಾದಗಳು
- ಹೇಮಾ....
ನಮಸ್ಕಾರ ಸ್ನೇಹಿತರೆ .ನಾನು ಹೇಮಾವತಿ.ಎನ್ . ನ್ಯಾಷನಲ್ ಕಾಲೇಜು ಜಯನಗರ, ಬೆಂಗಳೂರು ನ ಐಚ್ಚಿಕ ಕನ್ನಡದ ವಿದ್ಯಾರ್ಥಿನಿ. ಇಂದು ನಾನು ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೆನೆ. ಇಂದು ನಮ್ಮ ಕಾಲೇಜಿನಲ್ಲಿ ತಂಬಾಕು ಸೇವನೆ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲು ವಿದ್ಯಾರ್ಥಿ ಒರಿಯೆಂಟೇಷನ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಗಿತ್ತು. ಈ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಡಾ. ಶಾಲಿನಿರವರು ಮಾತಾನಾಡಿದರು.
ತಂಬಾಕು ಎನ್ನುವುದು ಒಂದು ಬಗೆಯ ಗಿಡ ,ಈ ಗಿಡದ ಎಲೆಗಳಲ್ಲಿ ನಿಕೋಟಿನ್ ಎಂಬ ಡ್ರಗ್ ಅಂಶ ಅಡಗಿರುತ್ತದೆ. ಈ ಎಲೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳು ಕಡಿಮೆ, ಆದರೆ ಕಾರ್ಖಾನೆಗಳು ತಂಬಾಕು ಬಳಸಿ ಬಿಡಿ, ಸೀಗರೇಟ್, ಗುಟ್ಕಾ, ಪಾನ ಮಸಾಲಾ, ಹುಕ್ಕಾ, ಎಲೆಕ್ಟ್ರಿಕ್ ಸಿಗರೆಟ್ ಈ ರೀತಿ ಅನೇಕ ಹೆಸರುಗಳಲ್ಲಿ ಟಾಬಾಕೊ ಪದಾರ್ಥಗಳನ್ನು ಮಾರುಕಟ್ಟೆಗೆ ತರುತ್ತಿದೆ. ಈ ಕಾರ್ಖಾನೆಗಳು ತಾವು ಉತ್ಪಾದಿಸುವ ಟಾಬಾಕೊ ಉತ್ಪನ್ನಗಳಲ್ಲಿ ಸುಮಾರು ೭೦೦೦ ಕ್ಕೂ ಹೆಚ್ಚಿನ ಕೆಮಿಕಲ್‌ಗಳನ್ನು ಬಳಸುತ್ತಿವೆ. ಅದರಲ್ಲಿ ೭೦ ಕೆಮಿಕಲ್‌ಗಳು ಕ್ಯಾನ್ಸರ್ ಕಾರಕಗಳಾಗಿವೆ.ಈ ತಂಬಾಕು ಸೇವಿಸಿದ ವ್ಯಕ್ತಿಗಳು ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಸಣ್ಣ ವಯಸ್ಸಿನಲ್ಲಿಯೆ ಮುದುಕರ ರೀತಿ ಕಾಣುವುದು, ನಾಲಿಗೆ ರುಚಿ ಗ್ರಹಿಸದಿರುವುದು, ದೇಹ ದುರ್ಬಲಗೊಳ್ಳುವುದು, ಅಕಾಲಿಕ ಸಾವು, ಕಿಡ್ನಿ ಸಮಸ್ಯೆ ಮುಂತಾದ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಭಾರತ ದೇಶದಲ್ಲಿ ೬,೦೦,೦೦,೦೦೦ ಜನ ಟಾಬಾಕೊ ಸೇವನೆಯಿಂದ ಬರುವ ರೋಗಗಳಿಂದ ಸಾವನ್ನೊಪ್ಪುತ್ತಿದ್ದಾರೆ. ಸರ್ಕಾರ ಟಾಬಾಕೊ ರೋಗಿಗಳಿಗೆ ಪ್ರತಿ ವರ್ಷ ೧೧೭ ಕೋಟಿ ಹಣ ಖರ್ಚು ಮಾಡುತ್ತಿದೆ. ಕ್ಯಾನ್ಸರ್‌ಗೆ ಗುರಿಯಾದವರು ಕೂಡ ಅಪಾರ ಪ್ರಮಾಣದ ಹಣ ಖರ್ಚು ಮಾಡಬೇಕಾಗುತ್ತದೆ.
ಇಂದು ನಮ್ಮ ಯುವಜನತೆ ಸಿನೆಮಾ ನಟರ ಅಡ್ವರ್‌ಟೈಜ್‌ಮೆಂಟ್ ಗಳನ್ನು ನೋಡಿ ಅನುಕರಣೆಮಾಡಿ ಟಾಬಾಕೊ ದುಚ್ಚಾಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸ್ಟ್ರೆಸ್ ಕಡಿಮೆ ಮಾಡಲು ಸಿಗರೇಟನ್ನು ಅಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಡ್ರಗ್ ಸೇವನೆ ಹಾಗು ಸಿಗರೇಟ್ ಸೇದುವುದು ಹುಡುಗ ಹುಡುಗಿಯರ ಫ್ಯಾಶನ್ ಅಗಿ ಹೋಗಿದೆ. ಒಂದು ಕಾಲದಲ್ಲಿ ಮಕ್ಕಳು ಮುದಿ ತಂದೆ-ತಾಯಿಯರನ್ನು ಆಸ್ಪತ್ರೆಗೆ ಹೊತ್ತೊಯ್ಯುತ್ತಿದ್ದರು, ಆದರೆ ಈಗ ವಯಸ್ಸಾದ ತಂದೆ ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಬಂದೊದಗಿದೆ. "ಟಾಬಾಕೊ ಸೇವನೆ ಆರೊಗ್ಯಕ್ಕೆ ಹಾನಿಕಾರಕ" ಎಂದು ಸಿಗರೇಟ್ ಪಾಕೆಟ್‌ಗಳ ಮೇಲೆ ಬರೆದಿದ್ದರು ಕೂಡ ಯೋಚನೆ ಮಾಡದೆ ಖರೀದಿಸುತ್ತಿದ್ದಾರೆ. ಇವರ ಬುದ್ದಿಗೆ ಏನು ಅನ್ನಬೇಕೊ ತಿಳಿಯದು.
ನಮ್ಮ ಸರ್ಕಾರಗಳು ಮದ್ಯ ಹಾಗು ಮಾದಕ ವಸ್ತುಗಳಿಂದ ಬರುವ ತೆರಿಗೆಯಿಂದ ಬಹುಭಾಗ ಆಡಳಿತ ನಡೆಸುತ್ತಿದ್ದಾರೆ, ಹಾಗಾಗಿ ಯಾವುದೇ ಗಂಭೀರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನ ಈ ಟಾಬಾಕೊ ಅಡಿಕ್ಷನ್ ನಿಂದ ಹೊರ ಬಂದು ಅರೋಗ್ಯಯುತ ಭಾರತವನ್ನು ಮರುನಿರ್ಮಾಣ ಮಾಡಬೇಕಾಗಿದೆ.
Click here to claim your Sponsored Listing.
Category
Contact the business
Telephone
Website
Address
33rd Cross, 7th Block, Jayanagar, Bengalore
Bangalore
560070
19/04/2023